4th-JUNE CURRENT AFFAIRS ( KANNADA )

 

1} PM-KISAN; ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.

ಸುದ್ದಿ:- 

ಕೇಂದ್ರ ಕೃಷಿ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಜೂನ್ 2023 ರಿಂದ ಮೇ 2024 ರ ಅವಧಿಯಲ್ಲಿ ದೇಶದಾದ್ಯಂತ 116,000 ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಸ್ವಯಂಪ್ರೇರಣೆಯಿಂದ ತಮ್ಮ ಪ್ರಯೋಜನಗಳನ್ನು ತ್ಯಜಿಸಿದ್ದಾರೆ.

 
> PM-KISAN ಯೋಜನೆ ಬಗ್ಗೆ :-

 • ಪ್ರಾರಂಭ : 24 ನೇ ಫೆಬ್ರವರಿ 2019, ಉತ್ತರ ಪ್ರದೇಶದ ಗೋರಖ್‌ಪುರ.

100% ಕೇಂದ್ರ ಪ್ರಾಯೋಜಿತ ಯೋಜನೆ

• ರೈತರಿಗೆ ವರ್ಷಕ್ಕೆ 6000 ರೂ (ಮೂರು ಹಂತದಲ್ಲಿ) ಕೊಡಮಾಡಲಾಗುತ್ತದೆ.

__________________________________________________

2} ಯುರೋಪಿಯನ್ ಚುನಾವಣೆಗಳು-2024

ಸುದ್ದಿ:-

 2024 ರ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯು ಜೂನ್ 6 ರಿಂದ 9 ರವರೆಗೆ ನಡೆಯಲಿದೆ.

> ಯುರೋಪಿಯನ್ ಪಾರ್ಲಿಮೆಂಟ್ :

•ಯುರೋಪಿಯನ್ ಕಮಿಷನ್‌ನ 13 ನೇ ಅಧ್ಯಕ್ಷೆ - ಉರ್ಸುಲಾ ಗೆರ್ಟ್ರುಡ್ ವಾನ್ ಡೆರ್ ಲೇಯೆನ್, ಜರ್ಮನಿ (2019 ರಿಂದ).

• ಯುರೋಪಿಯನ್ ಒಕ್ಕೂಟದ (EU) ಏಕೈಕ ಸಂಸದೀಯ ಸಂಸ್ಥೆಯಾಗಿದೆ.

• ಇದು ಯುರೋಪಿಯನ್ ಒಕ್ಕೂಟದ, 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ EU ನಾಗರಿಕರಿಂದ ನೇರವಾಗಿ ಚುನಾಯಿತ ಅಂಗವಾಗಿದೆ.

> ಚುನಾವಣೆಯ ಮಾಹಿತಿ :

• ಇದು 1979 ರಲ್ಲಿ ನಡೆದ ಮೊದಲ ನೇರ ಚುನಾವಣೆನಂತರ ಹತ್ತನೇ ಸಂಸತ್ತಿನ ಚುನಾವಣೆಯಾಗಿದೆ

ಬ್ರೆಕ್ಸಿಟ್ ನಂತರದ ಮೊದಲ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಾಗಿದೆ.

• ಯುರೋಪಿಯನ್ ಪಾರ್ಲಿಮೆಂಟ್‌ಗೆ ಎಲ್ಲಾ 720 ಸ್ಥಾನಗಳು ಬಹುಮತಕ್ಕೆ 361 ಸ್ಥಾನಗಳು ಬೇಕಾಗುತ್ತವೆ.

> ಯುರೋಪಿಯನ್ ಒಕ್ಕೂಟದ (EU):-

• ಒಕ್ಕೂಟವು 27 ಯುರೋಪ್ ದೇಶಗಳ ಒಂದು ಗುಂಪಾಗಿದೆ.

• ಕಾರ್ಯ : EUನ ಸುಸಂಘಟಿತ ಆರ್ಥಿಕ ಮತ್ತು ರಾಜಕೀಯ ಬ್ಲಾಕ್ ಆಗಿ ಕಾರ್ಯ ನಿರ್ವಹಿಸುತ್ತದೆ.

ಮಾಸ್ಟ್ರಿಚ್ ಒಪ್ಪಂದ-1992 - ಇದು ಯುರೋಪಿಯನ್ ಒಕ್ಕೂಟದ ಸ್ಥಾಪನೆಗೆ ಕಾರಣ.

     - ಇದು ಒಕ್ಕೂಟದ ಸಾಮಾನ್ಯ ಕರೆನ್ಸಿ ಯುರೋ ಸೃಷ್ಟಿಗೆ ಕಾರಣವಾಯಿತು. ( 19 ಸದಸ್ಯರು ಮಾತ್ರ ಈ ಕರೆನ್ಸಿಯನ್ನು ಬಳಸುತ್ತಾರೆ. ಇನ್ನು 8 ಸದಸ್ಯರು ಬಳಸುವುದಿಲ್ಲ.)

     - ಇದು ಒಕ್ಕೂಟದ ಪೌರತ್ವವನ್ನು ಸ್ಥಾಪಿಸಿತು.

     - ಇದನ್ನು ಯುರೋಪಿಯನ್ ಒಕ್ಕೂಟದ ಒಪ್ಪಂದ ಎಂದೂ ಕರೆಯುತ್ತಾರೆ.

EU ನ ಆಡಳಿತ ರಚನೆ

 1. ಯುರೋಪಿಯನ್ ಕೌನ್ಸಿಲ್

 2. ಯುರೋಪಿಯನ್ ಪಾರ್ಲಿಮೆಂಟ್

 3. ಯುರೋಪಿಯನ್ ಒಕ್ಕೂಟದ ಕೌನ್ಸಿಲ್

 4. ಯುರೋಪಿಯನ್ ಕಮಿಷನ್

 5. ಯುರೋಪಿಯನ್ ಕೋರ್ಟ್ ಆಫ್ ಆಡಿಟರ್ಸ್

 6. ಯುರೋಪಿಯನ್ ಯೂನಿಯನ್ ನ್ಯಾಯಾಲಯ

 7. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್

 8. ಹಣಕಾಸು ಮೇಲ್ವಿಚಾರಣೆಯ ಯುರೋಪಿಯನ್ ವ್ಯವಸ್ಥೆ.

__________________________________________________

3} ಬ್ರಹ್ಮೋಸ್‌ನ ಮಾಜಿ ಎಂಜಿನಿಯರ್‌ಗೆ-ಜೀವಾವಧಿ ಶಿಕ್ಷೆ .


ಸುದ್ದಿ:-

ಪಾಕಿಸ್ತಾನದ ಐಎಸ್‌ಐ ಪರ ಗೂಡಾಚಾರಿಕೆ ನಡೆಸಿದ ಕಾರಣ ನಾಗ್ಪುರ ನ್ಯಾಯಾಲಯ ನಿಶಾಂತ್ ಪ್ರದೀಪ್‌ಕುಮಾರ್ ಅಗರವಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.


ಬಳಸಿದ ಕಾಯ್ದೆ ಮತ್ತು ಕಾನೂನು :- 

1. CrPC ಯ, ಸೆಕ್ಷನ್ 235

2. ಐ.ಟಿ ಕಾಯ್ದೆಯ, ಸೆಕ್ಷನ್ 66

3. ಅಧೀಕೃತ ರಹಸ್ಯ ಕಾಯ್ದೆ (ಒ.ಎಸ್.ಎ)1923


ಬ್ರಹ್ಮೋಸ್ ( Brahmos)ಬಗ್ಗೆ :-

ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ

ಭಾರತ - ರಷ್ಯಾ ಜಂಟಿ ಯೋಜನೆ.


 • ಎರಡು-ಹಂತದ ಕ್ಷಿಪಣಿ

• ಬ್ರಹ್ಮೋಸ್ ಅನ್ನು ಬ್ರಹ್ಮಪುತ್ರ ಮತ್ತು ಮೋಸ್ಕೋ ನದಿಗಳಿಗೆ ಹೆಸರಿಸಲಾಗಿದೆ

ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ ಬ್ರಹ್ಮೋಸ್ ನ್ನು ವಿನ್ಯಾಸಗೊಳಿಸುವ, ಅಭಿವೃದ್ಧಿಪಡಿಸುವ ಮತ್ತು ಮಾರಾಟ ಮಾಡುವ ಜವಾಬ್ದಾರಿಯನ್ನು ಹೊಂದಿದೆ.

ಬಹು-ಪ್ಲಾಟ್‌ಫಾರ್ಮ್ ಕ್ಷಿಪಣಿ

                           ಭೂಮಿ, ಗಾಳಿ ಮತ್ತು ಸಮುದ್ರದಿಂದ ಉಡಾಯಿಸಬಹುದು ಮತ್ತು ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ಹಗಲು ರಾತ್ರಿ ಎರಡರಲ್ಲೂ ಕಾರ್ಯನಿರ್ವಹಿಸುವ ನಿಖರತೆ ಹೊಂದಿದೆ.

ಫೈರ್ ಅಂಡ್ ಫರ್ಗೆಟ್ಸ್" ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ : ಉಡಾವಣೆಯ ನಂತರ ಹೆಚ್ಚಿನ ಮಾರ್ಗದರ್ಶನದ ಅಗತ್ಯವಿರುವುದಿಲ್ಲ.

__________________________________________________

4} 1951 ರ ಜನಪ್ರತಿನಿಧಿ ಕಾಯ್ದೆ (RPA)

1951 ರ ಜನಪ್ರತಿನಿಧಿ ಕಾಯ್ದೆ (RPA) ಭಾರತದ ಚುನಾವಣೆ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ ;

1. ಚುನಾವಣೆ ಆಯೋಗದ ರಚನೆ

2. ಪ್ರಜಾಪ್ರತಿನಿಧಿಗಳ ಅರ್ಹತೆ 

3. ಅನರ್ಹತೆ

4. ಚುನಾವಣೆ ನಡೆಸುವ ವಿಧಾನ

5. ಆಚಾರ ಸಂಹಿತೆ

6. ಪ್ರಚಾರ ನಿಯಂತ್ರಣ

7. ಚುನಾವಣಾ ವ್ಯಯದ ಮಿತಿ

8. ವಿವಾದಗಳ ಪರಿಹಾರಗಳು

9. ದಂಡನಾತ್ಮಕ ಕ್ರಮಗಳು

   

1951 ರ ಜನಪ್ರತಿನಿಧಿ ಕಾಯ್ದೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಚುನಾವಣೆಗಳ ನಿಸ್ಪಕ್ಷಪಾತತೆಯನ್ನು ಮತ್ತು ನ್ಯಾಯತೆಯನ್ನು ಖಾತ್ರಿ ಪಡಿಸಲು ಮಹತ್ವದ ಪಾತ್ರವನ್ನು ವಹಿಸಿದೆ.

Post a Comment

0 Comments

7TH-JUNE CURRENT AFFAIRS