3rd JUNE CURRENT AFFAIRS

 

1} INS- ಶಿವಾಲಿಕ್ 

ಸುದ್ದಿ :- 

ಭಾರತದ ನೌಕಾ ಹಡಗು INS- ಶಿವಾಲಿಕ್ ನ್ನು ಭಾರತದ ಕಡಲ ವ್ಯಾಯಾಮಗಳಾದ ಜಪಾನ್ - ಇಂಡಿಯಾ ಮರಿಟೈಮ್ ಎಕ್ಸರ್ಸೈಜ್(jimex) ಮತ್ತು ರೀಮ್ ಆಫ್ ಪೆಸಿಫಿಕ್ (rimpac) ಮಿಲಿಟರಿ ಎಕ್ಸರ್ಸೈಜ್ ಗಳಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ.



>>INS- ಶಿವಾಲಿಕ್ ಬಗ್ಗೆ :

CODOG ಪ್ರೊಪಲ್ಶನ್ ಸಿಸ್ಟಮ್ ಅನ್ನು ಬಳಸಿದ ಮೊದಲ ಭಾರತೀಯ ನೌಕಾಪಡೆಯ ಹಡಗು.

• ನಿರ್ಮಾಣ: ಮಜಗಾನ್ ಡಾಕ್ ಲಿಮಿಟೆಡ್ (MDL)

• ಇದು ಭಾರತ ತಯಾರಿಸಿದ ಮೊದಲ ರಹಸ್ಯ ಯುದ್ಧ ನೌಕೆಯಾಗಿದೆ

• ಈ ನೌಕೆಯನ್ನು 2010 ರಲ್ಲಿ ನೌಕಾಪಡೆಗೆ ಇಳಿಸಲಾಯಿತು.

__________________________________________________


2} ಜಾಗತಿಕ ಸಾಂಕ್ರಾಮಿಕ ಒಪ್ಪಂದ


=>ಸುದ್ದಿ:-

2025 ರ ವೇಳೆಗೆ "ಜಾಗತಿಕ ಸಾಂಕ್ರಾಮಿಕ ಒಪ್ಪಂದ"ದ

 à²•ುರಿತು "ವಿಶ್ವ ಆರೋಗ್ಯ ಅಸೆಂಬ್ಲಿ" (WHA) ವಾರ್ಷಿಕ ಸಭೆಯಲ್ಲಿ ಮಾತನಾಡಿತು.

 •à²¹ಾಗೂ "ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳು"(2005) (IHR) ಗೆ ನಿರ್ಣಾಯಕ ತಿದ್ದುಪಡಿಗಳ ಒಂದು ಸೆಟ್ ಅನ್ನು ಒಪ್ಪಿಕೊಂಡಿದೆ.


=>ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳಿಗೆ ಸಮ್ಮತಿಸಲಾದ ಪ್ರಮುಖ ತಿದ್ದುಪಡಿಗಳು:-

1.ಸಾಂಕ್ರಾಮಿಕ ತುರ್ತು ಪರಿಸ್ಥಿತಿಯ ವ್ಯಾಖ್ಯಾನದ ಪರಿಚಯ

2.ರಾಷ್ಟ್ರೀಯ IHR(ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳು) ಪ್ರಾಧಿಕಾರಗಳ ರಚನೆ.

3.ಅಭಿವೃದ್ಧಿಶೀಲ ರಾಷ್ಟ್ರಗಳ ಅಗತ್ಯತೆಗಳು ಮತ್ತು ಆದ್ಯತೆಗಳನ್ನು ಪರಿಹರಿಸಲು ಅಗತ್ಯವಿರುವ ಹಣಕಾಸಿನ ಗುರುತಿಸುವಿಕೆ à²®à²¤್ತು ಹಣಕಾಸು ಕಾರ್ಯವಿಧಾನದ ಸ್ಥಾಪನೆಯನ್ನು ಒಳಗೊಂಡಿದೆ.


=>ವಿಶ್ವ ಆರೋಗ್ಯ ಅಸೆಂಬ್ಲಿ(WORLD HEALTH ASSEMBLY) :-

WHO(ವರ್ಲ್ಡ್ ಹೆಲ್ತ್ ಆರ್ಗನೈಜೇಷನ್)ನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ.

•WHO ಯ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸುತ್ತಾರೆ.

• ಇದರ ವಾರ್ಷಿಕ ಸಭೆಯನ್ನು WHOನ ಕೇಂದ್ರ ಕಚೇರಿಯಲ್ಲಿ, ಅಂದರೆ ಜಿನೀವಾ, ಸ್ವಿಟ್ಜರ್ಲೆಂಡ್ ನಲ್ಲಿ ನಡೆಸಲಾಗುತ್ತದೆ

- ಇದರ ಮುಖ್ಯ ಕಾರ್ಯಗಳು:-

• WHO ನ ಮಹಾನಿರ್ದೇಶಕರ ನೇಮಕಾತಿ

ಹಣಕಾಸು ನೀತಿಗಳ ಆಡಳಿತ 

• ಪ್ರಸ್ತಾವಿತ ಕಾರ್ಯಕ್ರಮದ ಬಜೆಟ್‌ನ ಪರಿಶೀಲನೆ ಮತ್ತು ಅನುಮೋದನೆ ಮಾಡುವುದು

ಸಂಸ್ಥೆಯ ನೀತಿಗಳನ್ನು ನಿರ್ಧರಿಸುವುದಾಗಿದೆ.

__________________________________________________


3}  ಡಾಗ್ ಹ್ಯಾಮರ್ಸ್ಕ್‌ಜೋಲ್ಡ್ ಪದಕ - ನಾಯಕ್ ಧನಂಜಯ್ ಕುಮಾರ್ ಸಿಂಗ್


•> ಯಾರಿಗೆ:-

ಭಾರತೀಯ ಶಾಂತಿಪಾಲಕ "ನಾಯಕ್ ಧನಂಜಯ್ ಕುಮಾರ್ ಸಿಂಗ್" ಅವರನ್ನು (ಮರಣೋತ್ತರ) *ಡಾಗ್ ಹ್ಯಾಮರ್ಸ್ಕ್‌ಜೋಲ್ಡ್ ಪದಕ* ನೀಡಿ ಗೌರವಿಸಲಾಗುತ್ತದೆ.


•> ಕಾರಣ :-

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (MONUSCO) "ಯು.ಎನ್ ಸ್ಟೆಬಿಲೈಜೇಷನ್ ಮಿಷನ್‌"ನೊಂದಿಗೆ ಸೇವೆ ಸಲ್ಲಿಸಿದಕ್ಕಾಗಿ.


=> UN ಶಾಂತಿಪಾಲಕರ ಅಂತರಾಷ್ಟ್ರೀಯ ದಿನ-

• ಪ್ರತಿವರ್ಷ 29 May, 2024 :

• 2024ರ ಥೀಮ್:- "ಭವಿಷ್ಯಕ್ಕೆ ಹೊಂದಿಕೊಳ್ಳಿ, ಒಟ್ಟಿಗೆ ಉತ್ತಮವಾಗಿ ನಿರ್ಮಿಸಿ".

•à²¸್ಥಾಪನೆ:- ಡಿಸೆಂಬರ್ 11, 2002 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ರೆಸಲ್ಯೂಶನ್ 57/129 ರಿಂದ.



ಯಾರ ವಿನಂತಿಯ ಮೇರೆಗೆ ಸ್ಥಾಪನೆ ಮಾಡಲಾಯಿತು?

-UN ಜನರಲ್ ಅಸೆಂಬ್ಲಿಗೆ ಉಕ್ರೇನಿಯನ್ ಪೀಸ್‌ಕೀಪರ್ಸ್ ಅಸೋಸಿಯೇಷನ್ ಮತ್ತು ಉಕ್ರೇನ್ ಸರ್ಕಾರದ ಅಧಿಕೃತ ವಿನಂತಿಯ ನಂತರ.



=>MONUSCO 

ಪೂರ್ಣರೂಪ :- 

MONUSCO " à²ª್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಯುನೈಟೆಡ್ ನೇಷನ್ಸ್ ಆರ್ಗನೈಸೇಶನ್ ಸ್ಟೆಬಿಲೈಸೇಶನ್ ಮಿಷನ್."

• ಸ್ಥಾಪನೆ :- 30 ನವೆಂಬರ್ 1999

• ಇದು "ಡೆಮಾಕ್ರಟಿಕ್ ರಿಪಬ್ಲಿಕ್ನಲ್ಲಿ"   ,ಯುನೈಟೆಡ್ ನೇಷನ್ಸ್ ನ  ಶಾಂತಿಪಾಲನಾ ಶಕ್ತಿಯಾಗಿದೆ.

• ಪ್ರಧಾನ ಕಚೇರಿ:- ಕಿನ್ಶಾಸಾ , DR ಕಾಂಗೋ

• ಪ್ರಸ್ತುತ ಅಧ್ಯಕ್ಷ :- ಬಿಂಟೌ ಕೀಟಾ(ಜನವರಿ 2021 ರಿಂದ)



• ಮಿಷನ್ DRC ಯನ್ನು 6 ವಲಯಗಳನ್ನು ಒಳಗೊಂಡಿದೆ, ಅವೆಂದರೆ;

1. ವಿಭಾಗ 1: Mbandaka

2. ವಿಭಾಗ 2 : ಕಿಸಂಗನಿ

3. ವಿಭಾಗ 3: ಕನಂಗ

4. ವಿಭಾಗ 4: ಕಲೇಮಿ

5. ವಿಭಾಗ 5: ಕಿಂಡು

6. ವಿಭಾಗ 6: ಬುನಿಯಾ

__________________________________________________


4} ಪಂಪ ಸರೋವರ - ರಾಕ್ ಶೆಲ್ಟರ್ ಪೇಂಟಿಂಗ್


=>ಸುದ್ದಿ :-

 à²¸à²°ೋವರದ ಬಳಿ 2500 ವರ್ಷ ಹಳೆಯ ರಾಕ್ ಶೆಲ್ಟರ್ ಪೇಂಟಿಂಗ್ ಗಳು ದೊರೆತಿವೆ. 


=>ಬಹಿರಂಗ ಪಡಿಸಿದ್ದು :

"ಕರ್ನಾಟಕ ರಾಜ್ಯ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆ"



>>ಸರೋವರ :

=>ಸ್ಥಳಹಂಪಿಯ ಬಳಿ, ಕೊಪ್ಪಳ ಜಿಲ್ಲೆಯಲ್ಲಿದೆ.

          ( ತುಂಗಭದ್ರಾ ನದಿಯ ದಕ್ಷಿಣ ಭಾಗದಲ್ಲಿದೆ)

=>ಮಹತ್ವ : ಹಿಂದೂ ಪುರಾಣಗಳಲ್ಲಿರುವ ಪಂಚ - ಸರೋವರ ಗಳಲ್ಲಿ ಒಂದಾಗಿದೆ. 

•à²ªಂಚ ಸರೋವರಗಳು:-

1.ಮಾನ್ ಸರೋವರ

2.ಬಿಂದು ಸರೋವರ

3.ನಾರಾಯಣ ಸರೋವರ

4.ಪಂಪ ಸರೋವರ

5.ಪುಷ್ಕರ ಸರೋವರ

ಹಿಂದೂ ಪುರಾಣಗಳ ಪ್ರಕಾರ ಶಿವನ ಪತ್ನಿಯಾದ ಪಾರ್ವತಿ ದೇವಿಯ ರೂಪವಾದ "ಪಂಪ", ಶಿವನಿಗೆ ಈ ಸ್ಥಳದಲ್ಲಿ ತಪಸ್ಸು ಮಾಡಿ ಭಕ್ತಿ ವ್ಯಕ್ತಪಡಿಸುತ್ತಿದ್ದಳು.

ರಾಮಾಯಣದಲ್ಲಿ ಉಲ್ಲೇಖಿಸಿದಂತೆ ಶಬರಿಯು ರಾಮನಿಗಾಗಿ ಇದೆ ಸ್ಥಳದಲ್ಲಿ ಕಾಯುತ್ತಾ ಇದ್ದಿದ್ದು.

_________________________________________________________________

Post a Comment

0 Comments

7TH-JUNE CURRENT AFFAIRS