1st JUNE - 2024 CURRENT AFFAIRS

1.ಜಾಗತಿಕ ಆಹಾರ ನೀತಿ ವರದಿ - 2024

             

ಈ ವರದಿಯನ್ನು "ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ "(IFPRI)ಯು ಬಿಡುಗಡೆ ಮಾಡುತ್ತದೆ.



>"ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಬಗ್ಗೆ:- 

• ಸ್ಥಾಪನೆ: 1975

• ಪ್ರಸ್ತುತ 60 ಕ್ಕೂ ಹೆಚ್ಚು ದೇಶಗಳಲ್ಲಿ 600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ ಮತ್ತು ವ್ಯಾಪಕ ಶ್ರೇಣಿಯ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುತ್ತದೆ

• ಇದು CGIAR ನ ಸಂಶೋಧನಾ ಕೇಂದ್ರವಾಗಿದೆ , ಇದು ವಿಶ್ವದ ಅತಿದೊಡ್ಡ ಕೃಷಿ ನಾವೀನ್ಯತೆ ಜಾಲವಾಗಿದೆ.


> ಉದ್ದೇಶ :-

" ಬಡತನವನ್ನು ಸಮರ್ಥವಾಗಿ ಕಡಿಮೆ ಮಾಡುವ ಮತ್ತು ಹಸಿವು ಮತ್ತು ಅಪೌಷ್ಟಿಕತೆಯನ್ನು ಕೊನೆಗೊಳಿಸುವ ಸಂಶೋಧನೆ ಆಧಾರಿತ ನೀತಿ ಪರಿಹಾರಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ"


> ದೃಷ್ಟಿ :-

"ಹಸಿವು ಮತ್ತು ಅಪೌಷ್ಟಿಕತೆಯಿಂದ ಮುಕ್ತವಾದ ಜಗತ್ತನ್ನು ಸೃಷ್ಟಿಸುವುದು."


==> ವರದಿಯ ಪ್ರಮುಖ ಶಿಫಾರಸ್ಸುಗಳು :-

1. ವಿಶ್ವದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಆರ್ಥಿಕವಾಗಿ ಪೌಷ್ಟಿಕ ಆಹಾರವನ್ನು ಖರೀದಿಸಿ ಸೇವಿಸಲು ಆಗುವುದಿಲ್ಲ.

2. ಭಾರತದ ಬಹುತೇಕ 38% ಜನರು ಅಪೌಷ್ಟಿಕ ಆಹಾರ ಸೇವನೆ ಮಾಡುತ್ತಿದ್ದಾರೆ.

__________________________________________________


2.ರೇಬಿಸ್ - ಅಧಿಸೂಚಿತ ರೋಗ



ಸುದ್ದಿ :- 

ಸಾಂಕ್ರಾಮಿಕ ರೋಗಗಳ ಕಾಯ್ದೆ, 1897 ರ ಅಡಿಯಲ್ಲಿ ರೇಬಿಸ್ ರೋಗವನ್ನು ಒಂದು ಅಧಿಸೂಚಿತ ರೋಗ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಘೋಷಣೆ ಮಾಡಿದೆ.


>ರೇಬಿಸ್ ರೋಗದ ಬಗ್ಗೆ ಮಾಹಿತಿ :-

•ಇದು ಒಂದು ವೈರಲ್ ಝುನೋಟಿಕ್ (ನಾಯಿಗಳಿಂದ ಮನುಷ್ಯರಿಗೆ ಬರುವ ರೋಗ) ರೋಗವಾಗಿದೆ.

• ವೈರಸ್ : ರೇಬಿಸ್ ವೈರಸ್

• ಇದು "ನಿರ್ಲಕ್ಷಿತ ಉಷ್ಣವಲಯದ ಕಾಯಿಲೆಗಳಲ್ಲಿ (NTD)" ಒಂದಾಗಿದೆ.

• ಪರಿಣಾಮ : × ನರಮಂಡಲದ ಮೇಲೆ

                     × ನಿರ್ಲಕ್ಷಿಸಿದ್ದಲ್ಲಿ ಮೆದುಳಿನ ಕಾಯಿದೆ ಹಾಗೂ ಸಾವು ಕೂಡ ಸಂಭವಿಸಬಹುದು.


> ರೋಗ ಪ್ರಸರಣ :

• ಸುಮಾರು 99 ಪ್ರತಿಶತ ಪ್ರಕರಣಗಳಲ್ಲಿ, ಸಾಕುನಾಯಿಗಳು ಮನುಷ್ಯರಲ್ಲಿ ರೇಬಿಸ್ ವೈರಸ್ ಹರಡಲು ಕಾರಣವಾಗಿವೆ.

ಅಂಟಾರ್ಟಿಕಾ ಹೊರತುಪಡಿಸಿ ಬೇರೆ ಎಲ್ಲ ಖಂಡಗಳಲ್ಲಿ ಕಂಡುಬರುತ್ತದೆ.

ಎಷ್ಯಾ ಮತ್ತು ಆಫ್ರಿಕಾದಲ್ಲಿ ಸುಮಾರು 95 ಪ್ರತಿಶತಕ್ಕಿಂತ ಹೆಚ್ಚು ಸಾವು ಕಂಡುಬಂದಿವೆ.

>ಚಿಕಿತ್ಸೆ:- 

ನಾಯಿಗಳಿಗೆ ಲಸಿಕೆ ಮಾಡಿಸುವುದರ ಮೂಲಕ ತಡೆಗಟ್ಟಬಹುದಾಗಿದೆ.

• ಒಂದು ವೇಳೆ ರೋಗ ಬಂದಲ್ಲಿ, PEP ಗಾಯದ ಆರೈಕೆ, ಮಾನವ ರೇಬೀಸ್ ಪ್ರತಿರಕ್ಷಣಾ ಗ್ಲೋಬ್ಯುಲಿನ್ (HRIG) ಮತ್ತು ನಾಲ್ಕು ಅಥವಾ ಐದು ರೇಬೀಸ್ ಲಸಿಕೆಗಳ ಸರಣಿಯನ್ನು ರೇಬಿಸ್ ಚಿಕಿತ್ಸೆಯು ಒಳಗೊಂಡಿರುತ್ತದೆ.


__________________________________________________


3.ಕೊಲಂಬೊ ಪ್ರಕ್ರಿಯೆ

ಸುದ್ದಿ

ಭಾರತ ಮೊದಲ ಬಾರಿಗೆ ಈ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ವಹಿಸಿದೆ.


>ಕೊಲಂಬೊ ಪ್ರಕ್ರಿಯೆ ಎಂದರೇನು?

" ಇದು ಪ್ರಾದೇಶಿಕ ಸಲಹಾ ಪ್ರಕ್ರಿಯೆಯಾಗಿದೆ".


>ಉದ್ದೇಶ :- 

ಎಷ್ಯಾದ ಮೂಲ ದೇಶಗಳಿಗೆ ಸಾಗರೋತ್ತರ ಉದ್ಯೋಗ ಹಾಗೂ ಗುತ್ತಿಗೆ ಕಾರ್ಮಿಕರ ಸಮಾಲೋಚನೆಯ ನಿರ್ವಹಣೆಗೆ ವೇದಿಕೆಯನ್ನು ವದಗಿಸುವುದು.


> ಸದಸ್ಯತ್ವ :-

ಏಷ್ಯಾದ 12 ರಾಷ್ಟ್ರಗಳು -

1. ಅಫ್ಘಾನಿಸ್ತಾನ್ 

2. ಚೀನಾ

3. ಕಾಂಬೋಡಿಯ 

4. ಭಾರತ

5. ನೇಪಾಳ 

6. ಇಂಡೋನೇಷಿಯಾ 

7. ಪಾಕಿಸ್ತಾನ

8. ಫಿಲಿಪ್ಪೀನ್ಸ್ 

9. ಶ್ರೀ ಲಂಕಾ 

10. ಥಾಯ್ಲೆಂಡ್ 

11. ವಿಯೆಟ್ನಾಂ 

12. ಬಾಂಗ್ಲಾದೇಶ


> ಭಾರತವು 2003 ರಿಂದ ಈ ಪ್ರಕ್ರಿಯೆಯ ಸದಸ್ಯತ್ವವನ್ನು ಹೊಂದಿದೆ 


> ತಾಂತ್ರಿಕ ಬೆಂಬಲ ಮತ್ತು ಕಾರ್ಯದರ್ಶಿ:- 

I.O.M( ಅಂತಾರಾಷ್ಟ್ರೀಯ ವಲಸೆ ಸಂಘಟನೆ/ ಸಂಸ್ಥೆ )




> ಕಾರ್ಯ ವೈಖರಿ:-

 ಐದು ವಿಷಯಾಧಾರಿತ ಪ್ರದೇಶ ಕಾರ್ಯ ಗುಂಪುಗಳು(TAWGs- Thematic area working groups), ಅವೆಂದರೆ;


1.ಕೌಶಲ್ಯ ಮತ್ತು ಅರ್ಹತೆ ಗುರುತಿಸುವಿಕೆ (ಶ್ರೀಲಂಕಾದ ಅಧ್ಯಕ್ಷತೆ);


2.ನೈತಿಕ ನೇಮಕಾತಿಯನ್ನು ಪೋಷಿಸುವುದು (ಬಾಂಗ್ಲಾದೇಶದ ಅಧ್ಯಕ್ಷತೆ);


3.ನಿರ್ಗಮನದ ಪೂರ್ವ ದೃಷ್ಟಿಕೋನ ಮತ್ತು ಸಬಲೀಕರಣ (ಅಧ್ಯಕ್ಷತೆ ಫಿಲಿಪೈನ್ಸ್);


4.ರವಾನೆಗಳು (ಪಾಕಿಸ್ತಾನದ ಅಧ್ಯಕ್ಷತೆ);


5.ಕಾರ್ಮಿಕ ಮಾರುಕಟ್ಟೆ ವಿಶ್ಲೇಷಣೆ (ಥೈಲ್ಯಾಂಡ್ ಅಧ್ಯಕ್ಷತೆ)


________________________________________________


4.."ಆರ್.ಬಿ.ಐ"ನ *ಸ್ಟ್ರಾಟೆಜಿಕ್ ಆಕ್ಷನ್ ಪ್ಲಾನ್* 2024-25.



"ಆರ್ ಬಿ ಐ"ನ ವಾರ್ಷಿಕ ವರದಿ 2023-24 ರೂಪಾಯಿಯ ಅಂತರಾಷ್ಟ್ರೀಕರಣದ ಬಗ್ಗೆ ಮಾತನಾಡಿದೆ, ಅಂದರೆ ;


1. ಭಾರತದ ಹೊರ ನಿವಾಸಿಗಳಿಂದ ಭಾರತದ ಹೊರಗೆ ಖಾತೆಯನ್ನು ತೆರೆಯಲು ಅನುಮತಿ ನೀಡುವುದು.


2.ಭಾರತೀಯ ಬ್ಯಾಂಕುಗಳಿಂದ ಹೊರ ನಿವಾಸಿಗಳಿಗೆ ರೂಪಾಯಿ ಕರೆನ್ಸಿಯಲ್ಲಿ ಸಾಲವನ್ನು ಕೊಡುವುದು.


3. "ಎಫ್ ಡಿ ಐ ಮತ್ತು ಎಫ್ ಐ ಐ" ಗಳಿಗೆ ಸ್ಪೆಷಲ್ ನಾನ್ ರೆಸಿಡೆಂಟ್ ರೂಪೀ(SNRI)ಹಾಗು ಸ್ಪೆಷಲ್ ರೂಪೀ ವಾಸ್ಟ್ರೋ ಅಕೌಂಟ್ (SRVA) ಮೂಲಕ ಪ್ರವೇಶ ನೀಡುವುದು.



>ರೂಪಾಯಿಯನ್ನು ಅಂತಾರಾಷ್ಟ್ರೀಕರಣ ಮಾಡುವುದು ಹೇಗೆ?


ಅರ್ಥ:- 

" ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ರೂಪಾಯಿಯ ಬಳಕೆ ಮಾಡುವುದು ಎಂದರ್ಥ".



ಹೇಗೆ

1) ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ರೂಪಾಯಿಯ ಯತೇಚ್ಛ ಬಳಕೆ

2) ವಿದೇಶಿ ಕರೆನ್ಸಿ ಯೊಂದಿಗೆ ಸುಲಭವಾಗಿ ಪರಿವರ್ತನೆ .

3) ದೇಶದ ದೃಢವಾದ ವಿತ್ತೀಯ/ಹಣಕಾಸು ಮಾರುಕಟ್ಟೆ.



>ಸವಾಲುಗಳು 

• ರೂಪಾಯಿಯನ್ನು ಸಂಪೂರ್ಣವಾಗಿ ಪರಿವರ್ತನೆ ಮಾಡಲಾಗುವುದಿಲ್ಲ.

ಟ್ರಫಿನ್ ಬಿಕ್ಕಟ್ಟು 

• ದೇಶೀಯ ಸ್ಥೂಲ/ಬೃಹದ್ ಅರ್ಥಶಾಸ್ತ್ರದ ದೃಢತೆ ಮೇಲೆ ಪರಿಣಾಮ ಬೀರುತ್ತದೆ.

 


>ಲಾಭಗಳು :-

• ರೂಪಾಯಿಯು ಬಲಿಷ್ಟವಾಗುತ್ತದೆ.

ಡಾಲರ್ ಬೇಡಿಕೆ ಕಡಿಮೆಯಾಗುತ್ತದೆ.

ವ್ಯವಹಾರ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಅವುಗಳ ಸ್ಪರ್ಧಾತ್ಮಕತೆ ಹೆಚ್ಚಿಸುತ್ತದೆ.

ವಿದೇಶಿ ವಿನಿಮಯ ಸಂಗ್ರಹದ ಹೊಂದುವಿಕೆಯ ಅನಿವಾರ್ಯತೆಯನ್ನು ಕಡಿಮೆ ಮಾಡುತ್ತದೆ.

• ಬಾಹೀರ್ ಆಘಾತದ ದುರ್ಬಲತೆಗಳಿಂದ ರಕ್ಷಿಸುತ್ತದೆ.

Post a Comment

0 Comments

7TH-JUNE CURRENT AFFAIRS